ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಾಡುತ್ತಿರುವ ಭಾಷಣವನ್ನು ವಿಶ್ವವಿದ್ಯಾಲಯದ ಎಲ್ಲ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ವೀಕ್ಷಿಸುವಂತೆ ಯುಜಿಸಿ ಹಾಗೂ ಎಐಸಿಟಿಇ ಸುತ್ತೋಲೆ ಹೊರಡಿಸಿದೆ. ಈ ಯುಜಿಸಿ ಸುತ್ತೋಲೆಗೆ ಸಿಎಂ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಒಂದು ಧರ್ಮಕ್ಕೆ ಸೀಮಿತವಾದ ಭಾಷಣವಾಗಲಿದೆ ಎಂದಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, 'ನಾನು ಪತ್ರಿಕೆಗಳಲ್ಲಿ ಓದಿದೆ. ಹಿಂದುತ್ವದ ಬಗ್ಗೆ ಮಾತನಾಡಿದ್ರೆ ಹೇಳಿದ್ರೆ ಕೇಳಕೂಡದು. ಯುಜಿಸಿ ಭಾಷಣ ವೀಕ್ಷಣೆ ಕಡ್ಡಾಯಗೊಳಿಸಿರುವುದರ ಬಗ್ಗೆ ಮಾತನಾಡುತ್ತೇನೆ' ಎಂದರು.